ಸರ್ಕಾರ ಉಚಿತ ವಿದ್ಯುತ್ ಕೊಟ್ಟು ಕರೆಂಟ್ ನೀಡದ ಅಧಿಕಾರಿಗಳು: ದೇವರು ವರಕೊಟ್ಟರು ಪೂಜಾರಿ ಕೊಡದಂತಾಯ್ತು
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡೂವರೆ ವರ್ಷಗಳೆ ಕಳೆದಿವೆ, ಸರ್ಕಾರವು ನುಡಿದಂತೆ ಪಂಚಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಯು ಮನೆ ಮನೆಗಳಿಗೆ 200 ಯೂನಿಟ್ ವರೆಗೂ ಕೂಡ ಉಚಿತವಾಗಿ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿ ಜಾರಿ ಕೂಡ ಮಾಡಲಾಗಿದೆ. ಆದರೆ ಈಗ ಆ ಯೋಜನೆಗೆ ಗ್ರಹಣ ಹಿಡಿದಂತಿದೆ, ಇಂತದ್ದೊಂದು ಮಾತು ನೆಲಮಂಗಲ ತಾಲ್ಲೂಕಿನ ಜನರ ಮನಸ್ಸಲ್ಲಿ ಮೂಡಿದ್ದು, ಸರ್ಕಾರವು ಬಡವರಿಗೆ ಸಹಾಯವಾಗಲಿ ಎಂದು ನೀಡಿದ ಯೋಜನೆಯನ್ನು ಕೆಲವು ಕೆ.ಇ.ಬಿ ಅಧಿಕಾರಿಗಳು ಸೇರಿ ಹಾಳುಗೆಡುವುತ್ತಿದ್ದಾರೆ ಅದಕ್ಕೆ ಪ್ರತಿಯಗಿ ಪ್ರತಿ ದಿನವು ನೆಲಮಂಗಲ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಯಾವುದೆ ಸೂಚನೆಗಳಿಲ್ಲದೆ ಮಾಹಿತಿಯೂ ಕೂಡ ಇಲ್ಲದೆ ಕರೆಂಟ್ ಅನ್ನು ತೆಗೆಯುತ್ತಿದ್ದು ಬೇಕಾಬಿಟ್ಟಿ ನಿರ್ವಾಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕರಂಟ್ ಇಲ್ಲದ ವಿಚಾರವನ್ನು ಬೆಸ್ಕಾಂ ಸಹಾಯವಾಣಿಗೆ ತಿಳಿಸಿದಾಗ ಮತ್ತು ಯಾವುದಾದರೂ ಕಾರ್ಯನಿರ್ವಹಣೆ ಮಾಡಲಾಗುತ್ತದೆಯೆ ಎಂದು ಕೇಳಿದಾಗ ಹೆಚ್ಚಿನ ಸಂಧರ್ಭಗಳಲ್ಲಿ ಅವರಿಗೂ ಕೂಡ ಯಾಕೆ ಕರೆಂಟ್ ತೆಗೆಯಲಾಗಿದೆ ಎಂಬ ಮಾಹಿತಿ ಕೂಡ ಇರುವುದಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ ಮತ್ತು ಸಹಾಯವಾಣಿ ಕಂಟ್ರೋಲ್ ರೂಮ್ ಗೆ ಕೂಡ ಮಾಹಿತಿ ನೀಡದೆ ಯಾಕೆ ಪವರ್ ಕಟ್ ಮಾಡಲಾಗುತ್ತಿದೆ ಇದರ ಹಿಂದಿನ ಹುನ್ನಾರಗಳು ಏನು ಬಯಲಾಗಬೇಕು ಎಂಬ ಪ್ರಶ್ನೆಗಳು ಮೂಡಿ ಬರುತ್ತಿವೆ
ಸ್ಥಳಿಯ ಸಮಸ್ಯೆಗಳು ವಿದ್ಯುತ್ ಅಡಚಣೆಗಳು ಮತ್ತು ಇತರೆ ಸಂಬಂಧಿತ ವಿಚಾರಗಳನ್ನು ಮತ್ತು ಸಮಸ್ಯೆಗಳನ್ನು ತಿಳಿಸಲು ನಿರ್ವಹಿಸುವ ಜೂನಿಯರ್ ಇಂಜಿನಿಯರ್, ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಎಷ್ಟೇ ಬಾರಿ ಕರೆ ಮಾಡಿದರೂ ಕೂಡ ಸ್ವೀಕರಿಸುವುದಿಲ್ಲ ಮತ್ತು ಸ್ಪಂದಿಸುವುದಿಲ್ಲವಾಗಿದ್ದಾರೆ ಎಂದು ಎಫ್ ೭ ಫಿಡರ್ ನ ಗ್ರಾಹಕರರು ನನ್ನ ಬಳಿ ದೂರುಗಳನ್ನು ಹೇಳುತ್ತಲೆ ಇರುತ್ತಾರೆ ಮತ್ತು ಇಂತಹ ಜನಪರ ಯೋಜನೆಯ ಮತ್ತು ಸರ್ಕಾರದ ವಿರೋಧಿ ಮನಸ್ಥಿತಿಯ ಅಧಿಕಾರಿಗಳು ಈ ಯೋಜನೆಯ ಮೇಲೆ ಮತ್ತು ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ಬರಲೆಂದು ಈ ರೀತಿ ಕೃತಕವಾಗಿ ಕರೆಂಟ್ ಕಟ್ ಮಾಡುಲಾಗುತ್ತಿದ್ದು ಗೃಹಜ್ಯೋತಿಗೆ ಗ್ರಹಣ ಇಡಿಸುವ ಕೆಲಸ ಮಾಡಿತ್ತಿದ್ದಾರೆ, ಅಂತಹ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಇದರ ಬಗ್ಗೆ ಗಮನಹರಿಸಿ ಅವರನ್ನು ಅಮಾನತ್ತು ಮಾಡುವ ಶಿಕ್ಷೆ ನೀಡಬೇಕು ಎಂದು ಯುವ ಶಕ್ತಿ ರಾಜ್ಯ ಸಂಚಾಲಕ ಚಿಕ್ಕಮಾರನಹಳ್ಳಿ ಅನಂತ್ ರವರು ಒತ್ತಾಯ ಮಾಡಿದ್ದಾರೆ.
ಅದೇ ಲೈನ್ ನ ಮತ್ತೊಬ್ಬ ಗ್ರಾಹಕರಾದ ಉಪನ್ಯಾಸಕರಾದ ಮಂಜುನಾಥ್ ಮಾತನಾಡಿ ಈ ಲೈನ್ ಗ್ರಾಹಕರಿಗಾಗಿ ಬೆಸ್ಕಾಂ ಅಧಿಕಾರಿಗಳು ವಾಟ್ಸಪ್ ಗುಂಪೊಂದನ್ನು ಮಾಡಿ ಅದಕ್ಕೆ ಬೇಕಾದವನ್ನು ಮತ್ತು ಇವರ ಯಾವುದೇ ಸಮಸ್ಯೆಗಳನ್ನು ಪ್ರಶ್ನೆ ಮಾಡದವರನ್ನು ಸೇರಿಸಿಕೊಂಡಿದ್ದಾರೆ, ಜೊತೆಗೆ ಯಾರಾದರೂ ಪ್ರಶ್ನೆ ಮಾಡಿದರು ಕೂಡ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರ ಈ ಕೂಡಲೆ ಇದರ ಬಗ್ಗೆ ಪೂರ್ವಪರ ವಿಚಾರಿಸಿ ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡುತ್ತದೆಯೋ ಅಥವ ಸಮಸ್ಯೆ ಬಗೆಹರಿಸಿ ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡುತ್ತದೆಯೋ ಕಾದುನೋಡಬೇಕಿದೆ.
