ಬೆಂಗಳೂರು | ವಿಶೇಷ ವರದಿ

ನೀರಿನ ಬಿಕ್ಕಟ್ಟಿಗೆ ಜನರ ಧ್ವನಿ: ‘ಜಲ ಸತ್ಯಾಗ್ರಹ’

ನೀರು ಪ್ರತಿಯೊಬ್ಬರ ಬದುಕಿನ ಮೂಲಾಧಾರ. ಕುಡಿಯುವ ನೀರಿನ ಲಭ್ಯತೆ, ಅದರ ಗುಣಮಟ್ಟ ಮತ್ತು ಕೈಗೆಟುಕುವಿಕೆ ನೇರವಾಗಿ ಜನರ ಆರೋಗ್ಯ, ಜೀವನಮಟ್ಟ ಮತ್ತು ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಆದರೆ ನೀರಿನ ಕೊರತೆ, ಅಸಮರ್ಪಕ ಸರಬರಾಜು, ನೀರಿನ ಗುಣಮಟ್ಟದ ಕುರಿತ ಆತಂಕ ಹಾಗೂ ನೀರಿಗಾಗಿ ಹೆಚ್ಚುತ್ತಿರುವ ವೆಚ್ಚ ಹಲವು ಪ್ರದೇಶಗಳಲ್ಲಿ ಜನರ ಮುಂದಿರುವ ಗಂಭೀರ ಸವಾಲುಗಳಾಗಿವೆ.

ಈ ಹಿನ್ನೆಲೆಯಲ್ಲಿ, ನೀರಿನ ಸಮಸ್ಯೆಯನ್ನು ಕೇವಲ ಸ್ಥಳೀಯ ಅಥವಾ ಆಡಳಿತಾತ್ಮಕ ಸಮಸ್ಯೆಯಾಗಿ ಸೀಮಿತಗೊಳಿಸದೆ, ರಾಜ್ಯಮಟ್ಟದ ಪ್ರಮುಖ ಸಾರ್ವಜನಿಕ ವಿಚಾರವಾಗಿ ಮುನ್ನೆಲೆಗೆ ತರುವ ಉದ್ದೇಶದಿಂದ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಲ ಸತ್ಯಾಗ್ರಹದ ಸಂಚಾಲಕರಾದ ಸೈಯದ್ ಅಹಮದ್ ಹುಸೇನ್ (ಎಸ್.ಎ. ಹುಸೇನ್) ಅವರ ನೇತೃತ್ವದಲ್ಲಿ ಜಲ ಸತ್ಯಾಗ್ರಹದ ಅಭಿಯಾನ ರೂಪುಗೊಂಡಿದೆ.

ಈ ಹೋರಾಟದ ಕೇಂದ್ರಬಿಂದು ‘ನೀರಿನ ಗ್ಯಾರಂಟಿ’. ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತ, ಶುದ್ಧ ಹಾಗೂ ಕೈಗೆಟುಕುವ ಕುಡಿಯುವ ನೀರು ಲಭ್ಯವಾಗುವಂತೆ ಸರ್ಕಾರ ದೀರ್ಘಕಾಲಿಕ ಮತ್ತು ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು ಎಂಬ ಬೇಡಿಕೆಯನ್ನು ಅಭಿಯಾನ ಮುಂದಿಡುತ್ತಿದೆ.

‘ಜಲ ಸತ್ಯಾಗ್ರಹ’ವು ನೀರಿನ ಬಿಕ್ಕಟ್ಟನ್ನು ನಾಲ್ಕು ಪ್ರಮುಖ ಆಯಾಮಗಳಲ್ಲಿ ಚರ್ಚೆಗೆ ತರುತ್ತಿದೆ — ನೀರಿನ ಕೊರತೆ, ನೀರಿನ ಗುಣಮಟ್ಟ, ನೀರಿನ ಹೆಚ್ಚುತ್ತಿರುವ ವೆಚ್ಚ ಮತ್ತು ನೀರಿನ ಮೇಲಿನ ತೆರಿಗೆ ಹೊರೆ. ನೀರಿನ ಮೂಲಗಳ ಸಂರಕ್ಷಣೆ, ಸಮರ್ಪಕ ಹಂಚಿಕೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಜನರಿಗೆ ಕೈಗೆಟುಕುವ ದರದಲ್ಲಿ ನೀರು ಲಭ್ಯವಾಗುವ ವ್ಯವಸ್ಥೆ ನಿರ್ಮಿಸುವ ಕುರಿತು ಸಾರ್ವಜನಿಕ ಚರ್ಚೆಯನ್ನು ಬಲಪಡಿಸುವುದು ಇದರ ಪ್ರಮುಖ ಆಶಯವಾಗಿದೆ.

ಅದೇ ಸಂದರ್ಭದಲ್ಲಿ, ನೀರಿನ ಸಮಸ್ಯೆಗೆ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲದೆ ನಾಗರಿಕರ ಪಾತ್ರವೂ ಮಹತ್ವದ್ದಾಗಿದೆ ಎಂಬ ಸಂದೇಶವನ್ನು ಅಭಿಯಾನ ಒತ್ತಿಹೇಳುತ್ತದೆ. ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು, ಸಂಸ್ಕರಿಸಿದ ನೀರಿನ ಮರುಬಳಕೆ ಮತ್ತು ನೀರಿನ ಮೂಲಗಳ ರಕ್ಷಣೆಯಂತಹ ಕ್ರಮಗಳನ್ನು ಜನಜೀವನದ ಭಾಗವಾಗಿಸುವ ಅಗತ್ಯವಿದೆ.

ಹೀಗಾಗಿ, ಜಲ ಸತ್ಯಾಗ್ರಹದ ಉದ್ದೇಶ ನೀರಿನ ಸಮಸ್ಯೆಯ ಕುರಿತು ಕೇವಲ ಪ್ರತಿಭಟನೆ ನಡೆಸುವುದಕ್ಕೆ ಸೀಮಿತವಾಗದೆ, “ಪ್ರತಿಯೊಬ್ಬರಿಗೂ ನೀರಿನ ಗ್ಯಾರಂಟಿ” ಎಂಬ ಬೇಡಿಕೆಯನ್ನು ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ತಂದು, ನೀರಿನ ಭದ್ರತೆಯನ್ನು ಸರ್ಕಾರದ ಪ್ರಮುಖ ಸಾರ್ವಜನಿಕ ಜವಾಬ್ದಾರಿಯನ್ನಾಗಿ ರೂಪಿಸುವತ್ತ ಗಮನ ಸೆಳೆಯುವುದಾಗಿದೆ.

ಬೆಂಗಳೂರಿನ ಜಲ ಅಭಯ ಮತ್ತು ಮೇಕೆದಾಟು ಯೋಜನೆಯ ಅನಿವಾರ್ಯತೆ

ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಬೃಹತ್ ನಗರವಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಗತ್ಯತೆ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ರಾಜಧಾನಿಯ ದೀರ್ಘಕಾಲೀನ ಜಲ ಭದ್ರತೆಯನ್ನು ಖಾತ್ರಿಪಡಿಸುವ ಶಾಶ್ವತ ಜಲ ಪರಿಹಾರಗಳ ಬಗ್ಗೆ ಗಂಭೀರ ಚರ್ಚೆಯ ಅಗತ್ಯವಿದೆ. ಇದೇ ಆಶಯದೊಂದಿಗೆ, ಮೇಕೆದಾಟು ಯೋಜನೆಯನ್ನು ನಗರದ ಮುಂಬರುವ ಕುಡಿಯುವ ನೀರಿನ ಪೂರೈಕೆಗೆ ಅತ್ಯಂತ ಪ್ರಮುಖ ಮೂಲಸೌಕರ್ಯ ಯೋಜನೆಯಾಗಿ ಎಸ್.ಎ. ಹುಸೇನ್ ಅವರು ಪ್ರಬಲವಾಗಿ ಮುನ್ನಲೆಗೆ ತಂದಿದ್ದಾರೆ.
ಅವರ ದೃಷ್ಟಿಕೋನದಂತೆ, 4.75 TMC ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ಮೇಕೆದಾಟು ಯೋಜನೆ ಬೆಂಗಳೂರಿನ ನೀರಿನ ಅಭಾವವನ್ನು ನಿವಾರಿಸುವ ಜಾಲಕ್ಕೆ ಬಹುದೊಡ್ಡ ಶಕ್ತಿಯಾಗಬಲ್ಲದು. ಆದರೆ ಈ ಬೃಹತ್ ಯೋಜನೆ ಅನುಷ್ಠಾನದ ವೇಳೆ ಪರಿಸರ ರಕ್ಷಣೆಯನ್ನೂ ಆದ್ಯತೆಯಾಗಿ ಪರಿಗಣಿಸಬೇಕು ಎಂಬುದು ಅವರ ಖಚಿತ ನಿಲುವಾಗಿದೆ. ಇದಕ್ಕಾಗಿ ಯೋಜನೆಗೆ ಸಂಬಂಧಿಸಿದಂತೆ ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ಹಾಗೂ ಪಾರದರ್ಶಕ ಪರಿಶೀಲನೆ ನಡೆಸಿ, ಪರಿಸರ ಹಾನಿ ತಡೆಯುವ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡು ಮುಂದುವರಿಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೆ, ರಾಜಧಾನಿಯ ಜಲ ಸಂಪನ್ಮೂಲದ ಸುಸ್ಥಿರತೆಯನ್ನು ಬರಿ ಒಂದೇ ಯೋಜನೆಯಿಂದ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನೂ ಈ ಅಭಿಯಾನ ಸ್ಪಷ್ಟಪಡಿಸುತ್ತದೆ. ಮಳೆನೀರು ಕೊಯ್ಲು, ಸಂಸ್ಕರಿಸಿದ ತ್ಯಾಜ್ಯನೀರಿನ ಪುನರ್‌ಬಳಕೆ, ಅಂತರ್ಜಲ ವರ್ಧನೆ ಮತ್ತು ಕಟ್ಟುನಿಟ್ಟಿನ ಜಲ ಸಂರಕ್ಷಣೆಯಂತಹ ಕ್ರಮಗಳನ್ನು ಜೊತೆಜೊತೆಯಾಗಿ ಜಾರಿಗೆ ತರಬೇಕಿದೆ. ಈ ಸಮಗ್ರ ಜಲ ನಿರ್ವಹಣೆಯ ಪ್ರಮುಖ ಭಾಗವಾಗಿ ಮೇಕೆದಾಟು ಯೋಜನೆಯನ್ನು ವೀಕ್ಷಿಸಬೇಕು ಎಂಬುದು ಹುಸೇನ್ ಅವರ ಧ್ವನಿಯಾಗಿದೆ.
ಈ ಎಲ್ಲ ಅಂಶಗಳನ್ನು ಒಳಗೊಂಡು, “ಬೆಂಗಳೂರಿಗೆ ಮಾತ್ರವಲ್ಲ, ಇಡೀ ನಾಡಿನ ಪ್ರತಿಯೊಬ್ಬರಿಗೂ ನೀರಿನ ಗ್ಯಾರಂಟಿ” ಎಂಬ ವ್ಯಾಪಕ ಕಲ್ಪನೆಯೊಂದಿಗೆ ಜಲ ಮೂಲಗಳ ವೈಜ್ಞಾನಿಕ ಬಳಕೆ ಮತ್ತು ರಕ್ಷಣೆಯನ್ನು ಒಟ್ಟಾಗಿ ಕೊಂಡೊಯ್ಯುವ ಆಶಯವನ್ನು ಜಲ ಸತ್ಯಾಗ್ರಹ ಪ್ರತಿಪಾದಿಸುತ್ತಿದೆ.

ಜಲ ಹೋರಾಟಗಳ ಸುದೀರ್ಘ ಐತಿಹಾಸಿಕ ಹಾದಿ

ಎಸ್.ಎ. ಹುಸೇನ್ ಅವರ ಜಲ ಹೋರಾಟದ ಹಿನ್ನೆಲೆ ಇತ್ತೀಚಿನ ಬೆಳವಣಿಗೆಯಷ್ಟೇ ಅಲ್ಲ; ನೀರು ಮತ್ತು ಜಲ ಸಂಪನ್ಮೂಲಗಳ ವಿಚಾರದಲ್ಲಿ ಹಲವು ವರ್ಷಗಳಿಂದ ಅವರು ಭಾಗವಹಿಸಿಕೊಂಡು ಬಂದಿರುವ ಹೋರಾಟಗಳ ಸರಣಿಯ ಮುಂದುವರಿಕೆಯಾಗಿದೆ. 2012ರಲ್ಲಿ ನಡೆದ ‘ನಡಿಗೆ ಕೃಷ್ಣೆಯ ಕಡೆಗೆ’ 135 ಕಿ.ಮೀ. ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅವರು, ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸುವ ಬೇಡಿಕೆಗೆ ಬೆಂಬಲವಾಗಿ ಧ್ವನಿ ಎತ್ತಿದ್ದರು.
ನಂತರ ನಡೆದ ಮೇಕೆದಾಟು ಪಾದಯಾತ್ರೆಯಲ್ಲಿಯೂ ಅವರು ಪ್ರಮುಖ ಜವಾಬ್ದಾರಿ ವಹಿಸಿದ್ದರು. ಸುಮಾರು 165 ಕಿ.ಮೀ. ದೂರವನ್ನು 10 ದಿನಗಳ ಕಾಲ ಕ್ರಮಿಸಿದ ಅವರು, ಪಾದಯಾತ್ರೆಯ ಮಾಧ್ಯಮ ಮತ್ತು ಸಂವಹನ ನಿರ್ವಹಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಈ ಹೋರಾಟಗಳ ಅನುಭವವೇ ಇಂದು ನೀರಿನ ಸಮಸ್ಯೆಯನ್ನು ಕೇವಲ ಒಂದು ಪ್ರದೇಶದ ಸಮಸ್ಯೆಯಾಗಿ ನೋಡದೆ, ಕುಡಿಯುವ ನೀರು, ನೀರಿನ ಲಭ್ಯತೆ, ನೀರಿನ ಗುಣಮಟ್ಟ ಮತ್ತು ನೀರಿನ ಕೈಗೆಟುಕುವಿಕೆ ಸೇರಿದಂತೆ ಸಮಗ್ರವಾಗಿ ನೋಡುವ ದೃಷ್ಟಿಕೋನಕ್ಕೆ ಕಾರಣವಾಗಿದೆ.
ಈ ಹೋರಾಟದ ಮುಂದುವರಿದ ಭಾಗವಾಗಿಯೇ ಇಂದು ‘ಜಲ ಸತ್ಯಾಗ್ರಹದ’ ಮೂಲಕ ನೀರಿನ ಸಮಸ್ಯೆಯನ್ನು ಜನರ ಬದುಕಿನೊಂದಿಗೆ ನೇರವಾಗಿ ಜೋಡಿಸುವ ಪ್ರಯತ್ನ ನಡೆಯುತ್ತಿದೆ. ಇದರ ಕೇಂದ್ರ ಆಶಯ ‘ನೀರಿನ ಗ್ಯಾರಂಟಿ’. ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತ, ಶುದ್ಧ ಹಾಗೂ ಕೈಗೆಟುಕುವ ಕುಡಿಯುವ ನೀರು ಲಭ್ಯವಾಗಬೇಕು ಎಂಬ ಬೇಡಿಕೆಯೊಂದಿಗೆ, ನೀರಿನ ಸಮಸ್ಯೆಯನ್ನು ರಾಜ್ಯಮಟ್ಟದ ಸಾರ್ವಜನಿಕ ಚರ್ಚೆಯಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ.
ಈ ಪ್ರಯತ್ನ ಕೇವಲ ಬೇಡಿಕೆ ಮಂಡಿಸುವುದಕ್ಕೆ ಸೀಮಿತವಾಗಿಲ್ಲ. ನೀರಿನ ಸಮಸ್ಯೆ ಎದುರಿಸುತ್ತಿರುವ ಬಡವರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಮತ್ತು ರಾಜ್ಯದ ವಿವಿಧ ಭಾಗಗಳ ಜನರನ್ನು ತಲುಪಿ, ನೀರಿನ ಸಂರಕ್ಷಣೆ ಮತ್ತು ಸುರಕ್ಷಿತ ನೀರಿನ ಬಳಕೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ. ಇದರ ಭಾಗವಾಗಿ 12,000ಕ್ಕೂ ಹೆಚ್ಚು ಸ್ಟೀಲ್ ನೀರಿನ ಬಾಟಲಿಗಳನ್ನು ಇದುವರೆಗೆ ವಿತರಿಸಲಾಗಿದೆ. ಪೌರಕಾರ್ಮಿಕರು, ಗಿಗ್ ಮತ್ತು ಡೆಲಿವರಿ ಕಾರ್ಮಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರಂತಹ ದಿನನಿತ್ಯ ದುಡಿಯುವ ವರ್ಗದವರಿಗೆ ಸ್ಟೀಲ್ ಬಾಟಲಿಗಳನ್ನು ನೀಡಿ, ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡುವ ಕುರಿತು ಅರಿವು ಮೂಡಿಸಲಾಗುತ್ತಿದೆ.
ಬೆಂಗಳೂರಿನ ವಿವಿಧ ಭಾಗಗಳಿಗೆ ಹಾಗೂ ಕರ್ನಾಟಕದ ಇತರ ಪ್ರದೇಶಗಳಿಗೆ ಭೇಟಿ ನೀಡಿ ಲಕ್ಷಾಂತರ ಜನರನ್ನು ತಲುಪುವ ಮೂಲಕ, ಅವರನ್ನು ಈ ಅಭಿಯಾನದ ಅವಿಭಾಜ್ಯ ಅಂಗವಾಗಿ ಜೋಡಿಸುವ ಸಕ್ರಿಯ ಪ್ರಯತ್ನಗಳು ನಡೆಯುತ್ತಿವೆ.
ಇದರ ಜೊತೆಗೆ, ನೀರಿನ ಕೊರತೆ, ನೀರಿನ ಗುಣಮಟ್ಟ, ನೀರಿನ ವೆಚ್ಚ ಮತ್ತು ತೆರಿಗೆ ಹೊರೆ ಎಂಬ ನಾಲ್ಕು ಪ್ರಮುಖ ಆಯಾಮಗಳ ಕುರಿತು ಜನಜಾಗೃತಿ ಮೂಡಿಸುವುದು ಜಲ ಸತ್ಯಾಗ್ರಹದ ಭಾಗವಾಗಿದೆ. ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು, ಸಂಸ್ಕರಿಸಿದ ನೀರಿನ ಮರುಬಳಕೆ ಹಾಗೂ ಜಲಮೂಲಗಳ ರಕ್ಷಣೆಯಂತಹ ದೀರ್ಘಕಾಲಿಕ ಕ್ರಮಗಳ ಅಗತ್ಯವನ್ನೂ ಅಭಿಯಾನ ಒತ್ತಿಹೇಳುತ್ತಿದೆ.
ಹೀಗಾಗಿ, ಹಿಂದಿನ ಕೃಷ್ಣಾ ಮತ್ತು ಮೇಕೆದಾಟು ಜಲ ಹೋರಾಟಗಳಿಂದ ಆರಂಭವಾದ ಪ್ರಯಾಣ ಇಂದು ‘ನೀರಿನ ಗ್ಯಾರಂಟಿ’ ಎಂಬ ವಿಶಾಲ ಸಾರ್ವಜನಿಕ ಬೇಡಿಕೆಯತ್ತ ಸಾಗುತ್ತಿದೆ. “ನೀರು ದಾನವಲ್ಲ; ಅದು ಬದುಕಿನ ಅಗತ್ಯ” ಎಂಬ ಆಶಯದೊಂದಿಗೆ, ಪ್ರತಿಯೊಬ್ಬರಿಗೂ ಸುರಕ್ಷಿತ ಮತ್ತು ಕೈಗೆಟುಕುವ ನೀರು ದೊರೆಯುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬುದು ಜಲ ಸತ್ಯಾಗ್ರಹದ ಪ್ರಮುಖ ಸಂದೇಶವಾಗಿದೆ.

ನೀರಿನ ಗ್ಯಾರಂಟಿ: ಸರ್ಕಾರದ ಶಾಸನಬದ್ಧ ಕರ್ತವ್ಯ

ಸಾಮಾನ್ಯ ದಿನಗೂಲಿ ಕಾರ್ಮಿಕರು, ಪೌರಕಾರ್ಮಿಕರು, ಗಿಗ್ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಮತ್ತು ನಗರದ ಬಡ ಕುಟುಂಬಗಳಿಗೆ ಶುದ್ಧ నీರು ಸಾರ್ವತ್ರಿಕವಾಗಿ ಸಿಗುವಂತಾಗಬೇಕು. ಅಭಾವವಿರುವ ಪ್ರದೇಶಗಳಿಗೆ ಕಾಯಂ ಪೂರೈಕೆ ಜಾಲ, ಜಲಮೂಲಗಳ ರಕ್ಷಣೆ ಹಾಗೂ ಕೈಗೆಟುಕುವ ದರದಲ್ಲಿ ನಿರಂತರ ನೀರು ಒದಗಿಸುವುದು ಸರ್ಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನೀರಿನ ಗ್ಯಾರಂಟಿ ಎಂದರೆ ತಾತ್ಕಾಲಿಕ ಪರಿಹಾರವಲ್ಲ; ಸುಭದ್ರ ಮೂಲಸೌಕರ್ಯ, ಕಟ್ಟುನಿಟ್ಟಿನ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸುಸ್ಥಿರ ಪೂರೈಕೆ ವ್ಯವಸ್ಥೆಯನ್ನು ನಿರ್ಮಿಸುವುದಾಗಿದೆ.

ಜನಜಾಗೃತಿ ಮತ್ತು 12,000ಕ್ಕೂ ಹೆಚ್ಚು ಸ್ಟೀಲ್ ಬಾಟಲಿಗಳ ಉಚಿತ ವಿತರಣೆ

ದೊಡ್ಡ ನೀರಾವರಿ ಯೋಜನೆಗಳಷ್ಟೇ ಗಂಭೀರವಾಗಿ, ಕಡುಬಿಸಿಲಿನಲ್ಲಿ ದುಡಿಯುವ ಶ್ರಮಿಕರ ನಿತ್ಯದ ದಾಹವನ್ನು ತಣಿಸುವ ಮಾನವೀಯ ಕಳಕಳಿಯನ್ನು ಜಲ ಸತ್ಯಾಗ್ರಹ ಮೆರೆದಿದೆ. ಪೌರಕಾರ್ಮಿಕರು, ನಿರ್ಮಾಣ ಕಾರ್ಮಿಕರು ಹಾಗೂ ಆಟೋ-ಟ್ಯಾಕ್ಸಿ ಡೆಲಿವರಿ ಚಾಲಕರನ್ನು ತಲುಪುವ ಕೆಲಸ ನಿರಂತರವಾಗಿ ಸಾಗಿದೆ.
ಅಭಿಯಾನದ ಸಾಂಕೇತಿಕ ಹಾಗೂ ಪ್ರಾಯೋಗಿಕ ಹೆಜ್ಜೆಯಾಗಿ ಇದುವರೆಗೆ 12,000ಕ್ಕೂ ಹೆಚ್ಚು ಉನ್ನತ ಗುಣಮಟ್ಟದ ಸ್ಟೀಲ್ ನೀರಿನ ಬಾಟಲಿಗಳನ್ನು ಶ್ರಮಿಕ ವರ್ಗಕ್ಕೆ ಉಚಿತವಾಗಿ ನೀಡಲಾಗಿದೆ. ದಿನಕ್ಕೆ ಸರಾಸರಿ 2-3 ಏಕಬಳಕೆಯ ಪ್ಲಾಸ್ಟಿಕ್ ಬಾಟಲಿಗಳ ಬಳಕೆಗೆ ತಡೆಹಾಕಿ, ಪ್ರತಿಯೊಬ್ಬರಿಂದ ವರ್ಷಕ್ಕೆ ಸುಮಾರು 1,000 ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಮೈಕ್ರೋಪ್ಲಾಸ್ಟಿಕ್‌ನಿಂದ ಬರುವ ಗಂಭೀರ ಆರೋಗ್ಯ ಅಪಾಯಗಳ ವಿರುದ್ಧ ಅರಿವು ಮೂಡಿಸುವುದು ಮುಖ್ಯ ಗುರಿಯಾಗಿದೆ.

ಕಲುಷಿತ ನೀರು, ಆರೋಗ್ಯ ಸುರಕ್ಷತೆ ಹಾಗೂ GST ವಿನಾಯಿತಿ ಬೇಡಿಕೆ

ನೀರಿನ ಗುಣಮಟ್ಟದ ಸಮಸ್ಯೆ ಇಂದು ಹಲವು ಪ್ರದೇಶಗಳ ಜನಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ವಿಚಾರವಾಗಿದೆ. ಕೈಗಾರಿಕಾ ತ್ಯಾಜ್ಯ, ಕೃಷಿ ಚಟುವಟಿಕೆಗಳಿಂದ ಉಂಟಾಗುವ ಮಾಲಿನ್ಯ ಹಾಗೂ ಅಂತರ್ಜಲದ ಗುಣಮಟ್ಟದಲ್ಲಿನ ಬದಲಾವಣೆಗಳಂತಹ ಕಾರಣಗಳಿಂದ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಕುರಿತು ಆತಂಕಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ, ಅನೇಕ ಕುಟುಂಬಗಳು ಕುಡಿಯುವ ನೀರನ್ನು ಶುದ್ಧೀಕರಿಸಲು ವಾಟರ್ ಪ್ಯೂರಿಫೈಯರ್‌ಗಳು ಅಥವಾ ಪ್ಯಾಕೇಜ್ಡ್ ನೀರಿನಂತಹ ಪರ್ಯಾಯಗಳ ಮೇಲೆ ಹೆಚ್ಚುವರಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿವೆ.
ಈ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಸುರಕ್ಷಿತವಾಗಿಸಿಕೊಳ್ಳಲು ಅಗತ್ಯವಾಗುವ ವೆಚ್ಚ ಜನಸಾಮಾನ್ಯರ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯಾಗಬಾರದು ಎಂಬ ವಿಚಾರವನ್ನು ಜಲ ಸತ್ಯಾಗ್ರಹ ಮುನ್ನೆಲೆಗೆ ತಂದಿದೆ. ವಿಶೇಷವಾಗಿ, ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ನೀರು ಶುದ್ಧೀಕರಣ ಸಾಧನಗಳಿಗೆ ಸಂಬಂಧಿಸಿದ GST ಹೊರೆಯನ್ನು ಕಡಿಮೆ ಮಾಡುವ ಅಥವಾ ಸಂಪೂರ್ಣ ವಿನಾಯಿತಿ ನೀಡುವ ಬೇಡಿಕೆಯನ್ನು ಅಭಿಯಾನ ಮುಂದಿಡುತ್ತಿದೆ.
ಜಲ ಸತ್ಯಾಗ್ರಹದ ದೃಷ್ಟಿಕೋನದಲ್ಲಿ, ನೀರು ಒಂದು ಐಷಾರಾಮಿ ವಸ್ತುವಲ್ಲ; ಅದು ಪ್ರತಿಯೊಬ್ಬರ ದೈನಂದಿನ ಬದುಕಿನ ಅತ್ಯವಶ್ಯಕ ಅಗತ್ಯ. ಆದ್ದರಿಂದ, ಸುರಕ್ಷಿತ ಕುಡಿಯುವ ನೀರನ್ನು ಪಡೆಯಲು ಜನರು ಮಾಡಬೇಕಾಗುವ ಹೆಚ್ಚುವರಿ ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸರ್ಕಾರದ ನೀತಿ ಚರ್ಚೆಯ ಪ್ರಮುಖ ಭಾಗವಾಗಬೇಕು ಎಂಬುದು ಈ ಬೇಡಿಕೆಯ ಹಿಂದಿರುವ ಆಶಯವಾಗಿದೆ.
‘ನೀರಿನ ಗ್ಯಾರಂಟಿ’ಯ ಭಾಗವಾಗಿ ನೀರಿನ ಲಭ್ಯತೆ ಮಾತ್ರವಲ್ಲದೆ, ಶುದ್ಧತೆ, ಸುರಕ್ಷತೆ ಮತ್ತು ಕೈಗೆಟುಕುವಿಕೆಯನ್ನೂ ಖಚಿತಪಡಿಸಬೇಕು ಎಂಬ ಸಮಗ್ರ ದೃಷ್ಟಿಕೋನವನ್ನು ಜಲ ಸತ್ಯಾಗ್ರಹ ಮುಂದಿಡುತ್ತಿದೆ.

ಚಿಕ್ಕಮಾರನಹಳ್ಳಿ ಅನಂತ್

Leave a Reply

Your email address will not be published. Required fields are marked *